Varthaman

‘ವರ್ತಮಾನ ‘ಕ್ಕೆ ಭವಿಷ್ಯದ ಹೊಸ ಮುನ್ನಡಿ

ಮೈಸೂರು, ಸಾಂಸ್ಕೃತಿಕ ಮತ್ತು ಪರಂಪರೆಗೆ ತನ್ನದೇ ಆದ ಛಾಪು ಮೂಡಿಸಿದೆ. ಸಾಕಷ್ಟು ಹೆಮ್ಮೆಯ ಸಂಗತಿಗಳೂ ಕೂಡ ಪರಂಪರೆಯ ಸಾಲಿಗೆ ಸೇರಿಕೊಂಡಿವೆ.

66 ವಸಂತಗಳನ್ನು ಕಂಡ ಮೈಸೂರಿನ ಹೆಮ್ಮೆಯ ‘ವರ್ತಮಾನ’ ಬೆಳಗಿನ ಪ್ರಾದೇಶಿಕ ದಿನ ಪತ್ರಿಕೆ ಕೂಡ ಹೊಸ ರೂಪದಲ್ಲಿ ಬರುತ್ತಿದೆ. ಪತ್ರಿಕೆಯು ಮೈಸೂರಿನ ಪರಂಪರೆ ಎತ್ತಿ ಹಿಡಿಯುವ ಜೊತೆಗೆ ಎಂಟೂ ಜಿಲ್ಲೆಗಳಲ್ಲಿ ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಸುದ್ದಿ, ಚಿತ್ರಣ ನೀಡುವ ಆಶಯ ಹೊಂದಿದೆ

ಡಿಜಿಟಲ್ ಯುಗದಲ್ಲಿಯೂ ಕೂಡ ಮುದ್ರಣ ಮಾಧ್ಯಮಕ್ಕೆ ತನ್ನ ಗುರುತಿಸಿಕೊಳ್ಳುವ ಗುಣವಿದೆ ಮತ್ತು ಪತ್ರಿಕೆಗಳನ್ನು ಗೌರವಿಸುವ ಓದುಗರೂ ಇದ್ದಾರೆಂಬುದೇ ನಮಗೆ ಶ್ರೀರಕ್ಷೆ.

‘ವರ್ತಮಾನ ‘ ಭವಿಷ್ಯದ ಮುನ್ನುಡಿ. ಇಂದಿನ ಯುವ ಪೀಳಿಗೆ ಭವಿಷ್ಯಕ್ಕೆ ಬೆಲೆ ಕೊಟ್ಟು, ವರ್ತಮಾನವನ್ನು ಆಸ್ವಾಧಿಸಿ ಅನುಭವಿಸುತ್ತಾರೆ. ನಾವೂ ಸಹ ವರ್ತಮಾನ ಸುದ್ದಿಗಳಿಗೆ ಬೆಲೆ ಕೊಟ್ಟು ಭವಿಷ್ಯದ ಮುನ್ನಡಿ ಹೇಗೆ ಇರಬೇಕು ಎಂಬುದನ್ನು ಸುದ್ದಿಗಳ ತಿರುಳಿನಲ್ಲಿ ಹುಡುಕುವ ಪ್ರಯತ್ನ ಮಾಡುತ್ತೇವೆ.

‘ವರ್ತಮಾನ’ ಭವಿಷ್ಯದ ಮುನ್ನುಡಿಯೂ ಹೌದು. ವಾಸ್ತವ ಸಂಗತಿಗಳ ಹೂರಣವೂ ಹೌದು. ಪತ್ರಿಕೆಗಳನ್ನು ಓದುವುದು ಒಂದು ಹವ್ಯಾಸ , ಒಂದು ಸಾಂಪ್ರದಾಯಕ ರೂಢಿ, ಜ್ಞಾನದ ಬೆಳಕು ನೀಡುವ ದೀವಟಿಗೆ ಎನ್ನುವ ಕಾಲ ಮರೆಯಲ್ಲಿ ಜಾರುತ್ತಿದೆ. ತಲೆಮಾರುಗಳಿಂದಲೂ ಇದ್ದ ಪತ್ರಿಕೆ ಓದುಗರ ಸಂಖ್ಯೆ ಈಗ ಕ್ಷೀಣವಾಗಿದೆ ನಿಜ. ಆದರೆ ಗುಣಮಟ್ಟದ ಓದುಗರು ನಿರಂತರವಾಗಿ ಇರುತ್ತಾರೆಂಬ ಭರವಸೆಯಲ್ಲಿ
‘ವರ್ತಮಾನ ‘ ಪತ್ರಿಕೆ ಹೊಸ ರೂಪದಲ್ಲಿ ಹೊರ ಹೊಮ್ಮಿದೆ

  • ಕೆ. ಎನ್. ರವಿ
    ಸಂಪಾದಕ
    ವರ್ತಮಾನ
    ಪ್ರಾದೇಶಿಕ ಬೆಳಗಿನ ದಿನ ಪತ್ರಿಕೆ